ಹೃದಯ ಹೃದಯ 1999 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಎಮ್. ಎಸ್. ರಾಜಶೇಖರ್ ನಿರ್ದೇಶಿಸಿದ್ದಾರೆ ಮತ್ತು ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಶಿವರಾಜಕುಮಾರ್, ರಮೇಶ್ ಅರವಿಂದ್ ಮತ್ತು ಅನು ಪ್ರಭಾಕರ್ ( ಇದು ಅವರ ಮೊದಲ ಚಿತ್ರ) ಪ್ರಮುಖ ಪಾತ್ರಗಳಲ್ಲಿ ಮತ್ತು ಶರತ್ ಬಾಬು, ಅವಿನಾಶ್ ಮತ್ತು ಚಿತ್ರಾ ಶೆಣೈ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಹಂಸಲೇಖ ಅವರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ೧೯೯೯-೨೦00 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ , ಚಲನಚಿತ್ರವು ಅತ್ಯುತ್ತಮ ನಟ, ಅತ್ಯುತ್ತಮ ಸಂಭಾಷಣೆ ಈ 2 ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪಡೆಯಿತು . == ಪಾತ್ರವರ್ಗ == ರವಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಡಾ ಸುರೇಶ್ ಆಗಿ ರಮೇಶ್ ಅರವಿಂದ್ ಉಷಾ ಪಾತ್ರದಲ್ಲಿ ಅನು ಪ್ರಭಾಕರ್ ಶರತ್ ಬಾಬು ಅವಿನಾಶ್ ಚಿತ್ರಾ ಶೆಣೈ ಮನದೀಪ್ ರಾಯ್ ಮೈಕೋ ಮಂಜು ಶಂಕರ ನಾರಾಯಣ ವೆಂಕಟೇಶ್ ಪ್ರಸಾದ್ ಹೇಮಾ ಬೆಳ್ಳೂರು ಜ್ಯೋತಿ ಗುರುಚರಣ್ ಸಿದ್ದರಾಜು ಕಲ್ಯಾಣಕರ್ ಜಯಕುಮಾರಿ ವಿನಯ್ ರಾಜ್‌ಕುಮಾರ್ (ಮಾಸ್ಟರ್ ವಿನಯ್ ರಾಘವೇಂದ್ರ ಎಂದು ಸಲ್ಲುತ್ತದೆ) ಜ್ಯೋತಿಕಾ == ಚಿತ್ರಸಂಗೀತ == ಹಾಡುಗಳನ್ನು ಹಂಸಲೇಖ ಬರೆದಿದ್ದು ಸಂಗೀತವನ್ನೂ ಸಂಯೋಜಿಸಿದ್ದಾರೆ. ರಾಜ್‌ಕುಮಾರ್ ಮತ್ತು ಕೆ. ಎಸ್. ಚಿತ್ರಾ ಅವರು ಹಾಡಿದ "ಓ ಪ್ರೇಮದ ಗಂಗೆಯೇ" ಹಾಡುಜನಪ್ರಿಯವಾಯಿತು. == ಪ್ರಶಸ್ತಿಗಳು == ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು (1999-2000) ಅತ್ಯುತ್ತಮ ನಟ - ಶಿವರಾಜಕುಮಾರ್ ಅತ್ಯುತ್ತಮ ಸಂಭಾಷಣೆ ಲೇಖಕ - ಎ ಜಿ ಶೇಷಾದ್ರಿ == ಉಲ್ಲೇಖಗಳು ==